Upendra
ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ಹಾಡಿಗೆ 25 ವರ್ಷಗಳಾಗಿದ್ದರೂ ಕನ್ನಡಿಗರಿಗೆ ಇನ್ನು ಫ್ರೆಶ್ ಅನುಭವ ಕೊಡುತ್ತಿರುವ ಹಾಡು, ಇದಕ್ಕ ಸಾಕ್ಷಿ ಕೆಲ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ರೀಲ್ಸ್ ಸಖತ್ ವೈರಲ್ ಆಗಿದ್ದು.
ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದ ಗುರುಕಿರಣ್ ರ ಮ್ಯೂಸಿಕ್ ಮಾಂತ್ರಿಕತೆಯೋ ಅಥವಾ ಹಾಡಿನಲ್ಲಿ ಅರ್ಥಕ್ಕಾಗಿ ತಲೆಗೆ ಹುಳ ಬಿಟ್ಟುಕೊಳ್ಳುವಂತೆ, ಡೀಪ್ ಆಲೋಚನೆಗೆ ನಮ್ಮನ್ನು ದೂಡುವ ಉಪೇಂದ್ರ (Actor Upendra) ರವರು ಬರೆದ ಸಾಲುಗಳೋ ಒಟ್ಟಿನಲ್ಲಿ ಈ ಹಾಡಿಗೆ ಒಂದು ಸಪರೇಟ್ ಫ್ಯಾನ್ ಬೇಸ್ ಇದೆ.
ಬಹುತೇಕ ಉಪ್ಪಿ ಡೈರೆಕ್ಷನ್ ಎಂದರೆ ಎಲ್ಲ ಸಿನಿಮಾಗಳು ಕೂಡ ಇದೇ ಜೋನರ್ ಎನ್ನಬಹುದು, ಹೀಗಾಗಿಯೇ ಅವರು ಬುದ್ಧಿವಂತರಿಗೆ ಮಾತ್ರ ಎನ್ನುವ ಟ್ಯಾಗ್ ಲೈನ್ ಬಳಸುವುದು. ಇಂತಹ ಹತ್ತಾರು ಹಿಟ್ ಗಳನ್ನು ಕನ್ನಡಕ್ಕೆ ಕೊಟ್ಟು ಪ್ರಯೋಗಾತ್ಮಕ ಸಿನಿಮಾಗಳ ನಿರ್ದೇಶನದಲ್ಲಿ ಸದಾ ಪ್ರಯತ್ನಶೀಲರಾಗಿರುವಂತಹ ಉಪೇಂದ್ರ ಅವರು ತಮ್ಮದೇ ಹೆಸರಿನ ಉಪೇಂದ್ರ ಸಿನಿಮಾವನ್ನು (Upendra Movie) 1999 ಡೈರೆಕ್ಷನ್ ಮಾಡಿ ನಾಯಕನಾಗಿ ಆಕ್ಟಿಂಗ್ ಕೂಡ ಮಾಡಿದ್ದರು.
ಅದು ಉಪೇಂದ್ರ ಅವರಿಗೆ ಆಗಷ್ಟೇ ವೃತ್ತಿ ಜೀವನವಾಗಿದ್ದ ಕಾಲ. ಓಂ ಸಿನಿಮಾ ದ ಹಿಟ್ ಕೊಟ್ಟ ಬಳಿಕ ಉಪೇಂದ್ರ ಸಿನಿಮಾ ಕಡೆ ಗಮನ ಹರಿಸಿದ್ದ ಇವರ ಕಥೆಗೆ ನಿರ್ಮಾಪಕಿ ಶಿಲ್ಪ ಶ್ರೀನಿವಾಸ್ ರವರು (Producer Shilpa Shrinivas) ಹಣ ಹೂಡಿ ತಮ್ಮ ಶ್ರೀನಿವಾಸ್ ಪ್ರೊಡಕ್ಷನ್ ಮೂಲಕ ಸಿನಿಮಾವನ್ನು ತೆರೆಗೆ ತಂದಿದ್ದರು. ಅಕ್ಟೋಬರ್ 22, 1999 ರಂದು ಸಿನಿಮಾ ತೆರೆ ಕಂಡು ನಂತರ ಒಂದು ಇತಿಹಾಸವೇ ಆಯಿತು.
ಈ ಬಗ್ಗೆ ಸಿನಿಮಾಗೆ 25 ವರ್ಷ (Silver Jubilee and re release) ತುಂಬಿರುವ ಹಿನ್ನೆಲೆಯಲ್ಲಿ ಅಂದಿನ ಯಶಸ್ಸನ್ನು ಕಾರ್ಯಕ್ರಮ ಮಾಡಿ ಮರುಮನನ ಮಾಡಿ ಸಂಭ್ರಮಿಸಲು ಆಲೋಚಿಸುತ್ತಿರುವ ಶಿಲ್ಪ ಶ್ರೀನಿವಾಸ್ ರವರು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಉಪೇಂದ್ರ ಸಿನಿಮಾ ನಮಗೆ ಆ ಕಾಲದಲ್ಲಿ ಎಷ್ಟು ದೊಡ್ಡ ಸಕ್ಸಸ್ ಕೊಟ್ಟಿತ್ತು ಎಂದರೆ ಈಗ ಕನ್ನಡದಲ್ಲಿ ಕಾಂತರಾ ಹಾಗೂ KGF ಸಿನಿಮಾಗಳ ಕುರಿತು ಜನ ಮಾತನಾಡುವ ರೀತಿ ಆಗ ಉಪೇಂದ್ರ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಇದಕ್ಕೆಲ್ಲ ಕಾರಣ ಉಪೇಂದ್ರ ಅವರ ಕಥೆ ಹಾಗೂ ಡೈರೆಕ್ಷನ್ ಮತ್ತು ಅವರ ನಟನೆ. ಸಿನಿಮಾ 2.5 ಕೋಟಿ ಬಜೆಟ್ ನಲ್ಲಿ ತಯಾರಾಗಿತ್ತು ಅದರ ದುಪ್ಪಟ್ಟು ಹಣವನ್ನು ನಾವು ದುಡಿದೆವು.
ನನಗೆ ನೆನಪಿರುವ ಹಾಗೆ ಬಹಳ ಕಡಿಮೆ ಸಂಭಾವನೆಯನ್ನು ಉಪೇಂದ್ರ ಅವರಿಗೆ ನೀಡಿದ್ದೆ ಆ ಕಾಲದಲ್ಲಿ 18 ಲಕ್ಷ ಸಂಭಾವನೆ ನೀಡಿರಬಹುದು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಉಪೇಂದ್ರ 25ನೇ ವರ್ಷದ ಸಂಭ್ರಮಾಚರಣೆಯನ್ನು ಮುಂದಿನ ತಿಂಗಳಿನಲ್ಲಿ ಮಾಡಲು ನಿರ್ಧರಿಸುವ ಬಗ್ಗೆ ಹಾಗೂ ಈ ಕಾರ್ಯಕ್ರಮಕ್ಕೆ ಪೆರೋಲ್ ಮೇಲೆ ದರ್ಶನ್ ಅವರನ್ನು ಹೊರಗೆ ತರಲು ಆಲೋಚಿಸಿರುವ ಬಗ್ಗೆ ಮತ್ತು ಅಂದು ಉಪೇಂದ್ರ ಚಿತ್ರ ರಿ ರಿಲೀಸ್ ಆಗುವ ಬಗ್ಗೆ ಕೂಡ ಇವರು ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾ ಬಗ್ಗೆ ಬಹುತೇಕರಿಗೆ ತಿಳಿಯದ ಇನ್ನಷ್ಟು ಸಂಗತಿಗಳೆಂದರೆ ಉಪೇಂದ್ರ ಟೈಟಲ್ ಅನ್ನು ಉಪೇಂದ್ರ ಅವರೇ ನಾಯಕ ಎನ್ನುವ ಕಾರಣಕ್ಕಾಗಿ ಮಾತ್ರ ಅಲ್ಲ ಇದರಲ್ಲಿ ಯು ಎಂದರೆ ಉಪೇಂದ್ರ ಮತ್ತು ಪಿ ಎಂದರೆ ಪ್ರೇಮ ಡಿ ಎಂದರೆ ದಾಮಿನಿ ಆರ್ ಎಂದರೆ ರವಿನಾ ತಂಡನ್ ಈ ಮೂವರು ನಾಯಕಿಯರು ಇದ್ದ ಕಾರಣ ಈ ಹೆಸರನ್ನು ನಿರ್ಧರಿಸಲಾಗಿತ್ತಂತೆ.
ಈ ಸಿನಿಮಾಕ್ಕಾಗಿ ಉಪೇಂದ್ರ ಅವರಿಗೆ ಫಿಲಂ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರೆತಿತ್ತು ಮತ್ತು 2001ರಲ್ಲಿ ಜಪಾನ್ ನ ಯುಬಾರಿ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ ಫಿಲಂ ಫೆಸ್ಟಿವಲ್ ನಲ್ಲಿ ಚಿತ್ರ ಪ್ರದರ್ಶನ ಕಂಡಿತ್ತು. ನೀವು ಈ ಸಿನಿಮಾ ಪ್ರೇಮಿ ಆಗಿದ್ದರೆ ಉಪೇಂದ್ರ ಚಿತ್ರದಲ್ಲಿ ಮೆಚ್ಚುಗೆಯಾಗಿದ್ದೇನು? ತಪ್ಪದೇ ಕಮೆಂಟ್ ಮಾಡಿ ತಿಳಿಸಿ…