Vanitha
ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಮದುವೆ ಎನ್ನುವ ಸಂಬಂಧಗಳು ನೀರಿನ ಮೇಲಿರುವ ಗುಳ್ಳೆಯಂತೆ. ಅದರಲ್ಲೂ ಸೆಲೆಬ್ರಿಟಿಗಳ ಬದುಕಿನಲ್ಲಂತೂ ಬಹಳ ಕಾಮನ್ ಎನಿಸುವಂತಾಗಿ ಬಿಟ್ಟಿದೆ. ಯಾಕೆಂದರೆ ನೆನ್ನೆ ಮೊನ್ನೆವರೆಗೂ ಜೋಡಿಯಾಗಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕ್ಲೋಸ್ ಆಗಿ ಫೋಟೋ ಹಂಚಿಕೊಂಡಿದ್ದವರ ಬಗ್ಗೆ ದಿಢೀರ್ ಎಂದು ಬ್ರೇಕಿಂಗ್ ನ್ಯೂಸ್ ನಲ್ಲಿ ವಿ’ಚ್ಛೇ’ದ’ನ’ದ ಬಗ್ಗೆ ಕೇಳಿ ಶಾ’ಕ್ ಆಗಿರುತ್ತೇವೆ.
ಸ್ಟಾರ್ ನಟರಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ಅನೇಕ ಸೆಲೆಬ್ರಿಟಿಗಳ ಜೋಡಿಗಳ ವಿಚ್ಛೇದನದ ಬಗ್ಗೆ ಕಂಡು ಕೇಳಿದ್ದ ನಮಗೆ ಅವರ ಮರುಮದುವೆ ವಿಚಾರ ಕೂಡ ಅಷ್ಟೇ ಕಾಮನ್. ಈಗ ಇದೇ ರೀತಿಯಾಗಿ ಮೂರು ಮೂರು ಬಾರಿ ವಿ’ಚ್ಛೇ’ದ’ನ’ ಹಾಗೂ ಮರುಮದುವೆ ಮೂಲಕ ಸುದ್ದಿಯಾಗುತ್ತಿದ್ದ ನಟಿಯ ನಾಲ್ಕನೇ ಮದುವೆ ಸುದ್ದಿ ಕೇಳಿ ಜನ ಇನ್ನಷ್ಟು ಶಾ’ಕ್ ಆಗಿದ್ದಾರೆ.
ತಮಿಳು ನಟ ವಿಜಯ್ ಕುಮಾರ್ ಪುತ್ರಿ ವನಿತಾ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಚಂದ್ರಲೇಖ ಚಿತ್ರದಲ್ಲಿ ನಾಯಕಿಯಾಗಿ ಲಾಂಚ್ ಆಗಿದ್ದ ಇವರು ಮಾಣಿಕ್ಕಂ, ಮಳ್ಳಿ ಪೆಳ್ಳಿ, ಅನೀತಿ, ಹಾರ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ ತಮಿಳಿನ ಬಿಗ್‌ಬಾಸ್ ಸೀಸನ್ 3ರ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ವನಿತಾ ಸಹೋದರಿ ಶ್ರೀದೇವಿ ಕನ್ನಡದಲ್ಲಿ ಪ್ರೀತಿಗಾಗಿ, ಕಾಂಚನಗಂಗ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ.
ಇವರ ತಂದೆ ವಿಜಯಕುಮಾರ್ ಕೂಡ ಕನ್ನಡದ ಹಲವು ಸಿನಿಮಾಗಳಲ್ಲಿ ಹಿರಿಯ ನಟರಾಗಿ ಕಾಣಿಸಿಕೊಂಡಿದ್ದಾರೆ. ವನಿತಾರವರಿಗೆ ಇದುವರೆಗೂ ಒಟ್ಟು ಮೂರು ಬಾರಿ ಮದುವೆಯಾಗಿದೆ. 24 ವರ್ಷಗಳ ಹಿಂದೆ ಆಕಾಶ್ ಎಂಬುವವರ ಜೊತೆ ಮದುವೆಯಾಗಿತ್ತು ಆದರೆ ಕಾರಣಾಂತರಗಳಿಂದ 7 ವರ್ಷಗಳ ಬಳಿಕ ಡಿ’ವೋ’ರ್ಸ್ ಪಡೆದು ದೂರಾಗಿದ್ದರು.
ಬಳಿಕ ಅದೇ ವರ್ಷ ಆನಂದ್ ಜಯರಾಜನ್ ಎಂಬುವರೊಂದಿಗೆ ಎರಡನೇ ಬಾರಿ ಹಸೆಮಣೆ ಏರಿದ್ದರು. ಆದರೆ ಈ ಬಂಧನವೂ 5 ವರ್ಷಗಳ ಬಳಿಕ ಡಿ’ವೋ’ರ್ಸ್ ನಲ್ಲಿ ದುರಂತ ಅಂತ್ಯ ಕಂಡಿತು.. 2ನೇ ಡಿ’ವೋ’ರ್ಸ್ ಆದ ಮೇಲೆ 8 ವರ್ಷ ವನಿತಾ ಒಬ್ಬೊಂಟಿಯಾಗಿಯೇ ಇದ್ದರು 2020ರಲ್ಲಿ ಪೀಟರ್ ಪೌಲ್ ಪರಿಚಯವಾದ ಮೇಲೆ 3ನೇ ಮದುವೆಗೂ ಒಪ್ಪಿದ್ದರು.
ಆದರೆ ಪೀಟರ್‌ಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು, ಅಲ್ಲದೇ ಆತ ಪತ್ನಿಯಿಂದ ಡಿ’ವೋ’ರ್ಸ್ ಪಡೆಯದೇ ವನಿತಾರೊಂದಿಗೆ ಎರಡನೇ ಮದುವೆ ಆಗಿದ್ದರಿಂದ ಆ ಮದುವೆಯು ಅಸಿಂಧುವಾಯಿತು. ಹಾಗಾಗಿ ಆತನಿಂದಲೂ ವನಿತಾ ವಿ’ಚ್ಛೇ’ದ’ನ ಪಡೆದು ದೂರಾವಾದರು. ಆದರೀಗ ವನಿತಾ 4 ನೇ ಮದುವೆ ಬಗ್ಗೆ ಘೋಷಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.
ಕೊರಿಯೋಗ್ರಫರ್ ರಾಬರ್ಟ್ ಎಂಬುವವರ ಜೊತೆ 4ನೇ ಮದುವೆಗೆ ಸಿದ್ದರಾಗಿದ್ದಾರೆ. ಇವರಿಬ್ಬರಿಗೂ 2013ರಲ್ಲೇ ರಾ ಪರಿಚಯವಿತ್ತಂತೆ. ಇಬ್ಬರೂ ಡೇಟಿಂಗ್ ನಡೆಸಿ, ನಡುವೆ ಮನಸ್ತಾಪ ಏರ್ಪಟ್ಟು 2017ರಲ್ಲಿ ಇಬ್ಬರಿಗೂ ಬ್ರೇ’ಕ್‌ಅಪ್ ಮಾಡಿಕೊಂಡಿದ್ದರು. ಇದೀಗ ಮತ್ತೆ ಜೋಡಿ ಪ್ಯಾಚ್ ಅಪ್ ಆಗಿ ಮದುವೆ ಆಗುತ್ತಿದ್ದಾರೆ.
ಅಕ್ಟೋಬರ್ 5ರಂದು ಡೇಟ್ ಸೇವ್ ಮಾಡಿಕೊಳ್ಳಿ ಎಂದು ವನಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಚ್‌ನಲ್ಲಿ ರಾಬರ್ಟ್ ಎದುರು ಮಂಡಿಯೂರಿ ಪ್ರಪೋಸ್ ಮಾಡುವಂತೆ ಫೋಟೊ ಶೂಟ್ ಮಾಡಿಸಿ ಅದರೊಂದಿಗೆ ಶೇರ್ ಮಾಡಿದ್ದಾರೆ. ಇಬ್ಬರು ಚರ್ಚ್‌ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ನಟಿ ಈ ಮದುವೆ ಇಂದಾದರೂ ಖುಷಿಯಿಂದ ಇರಲಿ, ಬಾಂಧವ್ಯ ಚಿರಕಾಲ ಗಟ್ಟಿಯಾಗಿರಲಿ ಎಂದು ನಾವು ಕೂಡ ಹರಸೋಣ.
https://www.instagram.com/p/DAu0LBeyGsA/?igsh=OWIzMWdhdDhlYmxk