Vinod Raj
ಸ್ಯಾಂಡಲ್ ವುಡ್ ನಲ್ಲಿ ಡ್ಯಾನ್ಸಿಂಗ್ ಕಿಂಗ್ (Dancing King Vinod Raj ) ಎಂದೇ ಟೈಟಲ್ ಪಡೆದು 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ಹೀರೋ ಆಗಿ ಮಿಂಚಿ ಸದ್ಯಕ್ಕೆ ವ್ಯವಸಾಯದತ್ತ ಮುಖ ಮಾಡಿ ಪ್ರಗತಿಪರ ಕೃಷಿಕರೂ ಕೂಡ ಆಗಿರುವ ವಿನೋದ್ ರಾಜ್ ಆಗಾಗ ತಮ್ಮ ಕುಟುಂಬದ ವಿಚಾರವಾಗಿ ಹಾಗೂ ತಮ್ಮ ಸಮಾಜಮುಖಿ ಕಾರ್ಯದ ಕಾರಣ ಸುದ್ದಿಯಲ್ಲಿರುತ್ತಾರೆ.
ಕನ್ನಡದ ಖ್ಯಾತ ನಟಿ ಲೀಲಾವತಿ (Actress Leelavathi Son) ಪುತ್ರ ಆಗಿರುವ ವಿನೋದ್ ರಾಜ್ ರವರು ತಮ್ಮ ತಾಯಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಕೊನೆ ದಿನದವರೆಗೂ ಅಮ್ಮನ ಜೊತೆಗಿದ್ದು ಮಗುವಂತೆ ಆರೈಕೆ ಮಾಡಿದ್ದರು. ಅಮ್ಮನ ಅಗಲಿಕೆ ಬಳಿಕ ಬಹಳ ನೊಂದಿದ್ದ ವಿನೋದ್ ಈಗ ಸುಧಾರಿಸಿಕೊಂಡು ಸಹಜ ಜೀವನದತ್ತ ಮುಖ ಮಾಡುತ್ತಿದ್ದಾರೆ. ಹಾಗೆ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ವಿನೋದ್ ರಾಜ್ ಈಗಷ್ಟೇ ಪತ್ನಿ ಹಾಗೂ ಮಗನೊಂದಿಗೆ ಮಗನ ಜೀವನದ ಒಂದು ಅಮೂಲ್ಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ.
ವಿನೋದ್ ರಾಜ್ ಅವರು ಪತ್ನಿ ಹಾಗೂ ಮಗ ಚೆನ್ನೈನಲ್ಲಿ ವಾಸವಿರುತ್ತಾರೆ. ಚೆನ್ನೈನಲ್ಲಿರುವ ಅಣ್ಣಾ ಯುನಿವರ್ಸಿಟಿಯಲ್ಲಿ ವಿನೋದ್ ರಾಜ್ ಪುತ್ರ ಯುವರಾಜ್ (Vinod Raj Son Yuvaraj) ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೀಗ ಅವರ ವಿದ್ಯಾಭ್ಯಾಸ ಪೂರ್ತಿಗೊಂಡಿದ್ದು ಕಾಲೇಜಿನಿಂದ ಪದವಿ ಪ್ರಮಾಣ ಪತ್ರ ವಿತರಣ ಕಾರ್ಯಕ್ರಮ ನಡೆಯುತ್ತಿತ್ತು.
ಮಗನ ಪದವಿ ಪ್ರಧಾನ ಸಮಾರಂಭಕ್ಕೆ ಪತ್ನಿ ಅನುವಿನ (awife Anu) ಜೊತೆ ವಿನೋದ್ ರಾಜ್ ಪಾಲ್ಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗನ ಸನ್ಮಾನದ ಫೋಟೋ ವೈರಲ್ ಆಗಿದೆ ಯುವರಾಜ್ ತಮ್ಮ ಸರ್ಟಿಫಿಕೇಟ್ ಹಿಡಿದಿರುವುದು, ಇವರ ಜೊತೆ ಅಕ್ಕ ಪಕ್ಕದಲ್ಲಿ ತಂದೆ ವಿನೋದ್ ರಾಜ್ ಹಾಗೂ ತಾಯಿ ಅನು ನಿಂತಿರುವುದನ್ನು ಕಾಣಬಹುದು.
ಇದೇ ಸಮಯದಲ್ಲಿ ಕುಟುಂಬದ ಕುರಿತ ಮತ್ತೊಂದು ವಿಚಾರ ಪ್ರಸ್ತಾಪವಾಗಿದೆ. ಲೀಲಾವತಿಯವರು ತಮ್ಮ ಮೊಮ್ಮಗನಿಗಾಗಿಯೇ ಪ್ರೀತಿಯಿಂದ ಚೆನ್ನೈನ ಸಮೀಪ ಇರುವ ಮಹಾಬಲಿಪುರಂನಲ್ಲಿ ಎರಡು ಎಕರೆ ಫಾರಂ ಹೌಸ್ ಮಾಡಿದ್ದಾರಂತೆ. ಈ ಫಾರಂ ಹೌಸ್ ನಲ್ಲಿಯೇ ಅನು ಹಾಗೂ ಪುತ್ರ ಇವರ ವಾಸ ಮಾಡುತ್ತಿರುವುರು ಎಂದು ತಿಳಿದು ಬಂದಿದೆ.
ಆದರೆ ತಾಯಿಯ ಸಲುವಾಗಿ ವಿನೋದ್ ರಾಜ್ ಮೊದಲಿಂದಲೂ ಸೋಲದೇವನಹಳ್ಳಿ ತೋಟದಲ್ಲಿ ಇರುತ್ತಿದ್ದರು. ಆದರೆ ಲೀಲಾವತಿಯವರ ಅಗಲಿಕೆ ಬಳಿಕ ಆ ನೋವನ್ನು ಮರೆಯುವುದಕ್ಕಾಗಿ ಹೆಚ್ಚಾಗಿ ಮಹಾಬಲಿಪುರಂ ನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರಂತೆ.
ಇನ್ನು ಯುವರಾಜ್ ರವರು ಕುಟುಂಬದ ವಾಡಿಕೆಯಂತೆ ಬಣ್ಣದ ಲೋಕಕ್ಕೆ ಷಕಾಲಿಡುತ್ತಾರಾ ಅಥವಾ ತಂದೆಯಂತೆ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರಾ ಅಥವಾ ತಮ್ಮದೇ ಆದ ಬೇರೆ ಗುರಿ ಹೊಂದಿದ್ದಾರೆಯಾ ಎನ್ನುವ ಕುತೂಹಲ ಹಲವರಿಗೆ ಇದೆ. ಈಗಷ್ಟೇ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿರುವ ಇವರ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡೋಣ.
ಡ್ಯಾನ್ಸ್ ರಾಜ ಎಂದು ಹೆಸರಾಗಿದ್ದ ವಿನೋದ್ ರಾಜ್ ಅವರು ಇಂಡಸ್ಟ್ರಿಯಲ್ಲಿ ಇನ್ನೂ ದೊಡ್ಡ ಮಟ್ಟಿಗೆ ಬೆಳೆಯಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ಅವರನ್ನು ಸೈಡ್ ಲೈನ್ ಮಾಡಲಾಯಿತು ಎಂದು ಹಲವರ ಅನಿಸಿಕೆ. ಆದರೆ ಮಗನ ಅದೃಷ್ಟ ಏನಿದೆಯೋ ಮಗನಾದರೂ ಬಂದು ತಂದೆ ಹಾಗೂ ಅಜ್ಜಿಯ ಆಸೆ ಪೂರೈಸಬೇಕು ಎನ್ನುವುದು ಹಲವರ ಅಭಿಪ್ರಾಯ.
ಇನ್ನು ಕೆಲವು ವರ್ಗದ ಅಭಿಮಾನಿಗಳು ವಿನೋದ್ ರಾಜ್ ಈಗ ತುಂಬಾ ಆರಾಮಾಗಿದ್ದಾರೆ, ಎಲ್ಲಿದ್ದರೂ ಹೇಗಿದ್ದರೂ ಕುಟುಂಬದೊಂದಿಗೆ ಸಂತೋಷವಾಗಿರಲಿ ಎಂದು ಹಾರೈಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.