Arpita: ಮಾಜಿ ಪತಿ ಕಿರಿಕ್ ಕೀರ್ತಿ ಹಾಗೂ ನಿರೂಪಕ ನಿರಂಜನ್ ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ಕೊಟ್ಟ ಅರ್ಪಿತಾ, ಅಷ್ಟಕ್ಕೂ ಕಾರಣವೇನು ಗೊತ್ತಾ?…

Arpita

ಪತ್ರಿಕೋದ್ಯಮದಲ್ಲಿ ಪ್ರಖ್ಯಾತಿಯಾಗಿ ಬಳಿಕ ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಮೂಲಕ ಕನ್ನಡಿಗರಿಗೆ ಚಿರ ಪರಿಚಿತ ಮುಖವಾಗಿರುವ ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (Kirik Keerthi) ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪಬ್ಲಿಕ್ ಲೈಫ್ ನಲ್ಲಿ ಗುರುತಿಸಿಕೊಂಡಿರುವ ಕಿರಿಕ್ ಕೀರ್ತಿ ಅವರ ಪ್ರತಿಯೊಂದು ವಿಚಾರವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುತ್ತದೆ.

ಅದರಲ್ಲೂ ಕೀರ್ತಿ ಅವರ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ಕೆಲವು ದಿನಗಳಿಂದ ಅವರ ಪರ್ಸನಲ್ ವಿಚಾರವನ್ನು ಬಹಳ ಟ್ರೋಲ್ ಮಾಡಲಾಗುತ್ತಿದೆ. ವಿಪರೀತ ಟ್ರೋಲ್ ಗಳಿಂದ, ಬ್ಯಾಡ್ ಕಮೆಂಟ ಗಳಿಂದ ತೀರಾ ಬೇಸತ್ತು ಹೋಗಿದ್ದ ಕಿರಿಕ್ ಕೀರ್ತಿ ಇತ್ತೀಚಿಗೆ ಚೇತರಿಸಿಕೊಂಡಿದ್ದರು. ಆದರೆ ಮತ್ತೊಮ್ಮೆ ಮುಖಭಂಗವಾಗಿದೆ. ಗೆಳೆಯ ಮಾಡಿದ ತಪ್ಪಿನಿಂದಾಗಿ ಮಾಜಿ ಪತ್ನಿಯಿಂದ ಕೊನೆಯ ವಾರ್ನಿಂಗ್ ಸಿಕ್ಕಿದೆ.

WhatsApp Group Join Now
Telegram Group Join Now

ಕಿರಿಕ್ ಕೀರ್ತಿ ಹಾಗೂ ಅರ್ಪಿತ ಜೋಡಿ ಬಗ್ಗೆ ಕರುನಾಡೇ ಮೆಚ್ಚಿ ಮಾತನಾಡಿತ್ತು. ಬಿಗ್ ಬಾಸ್ ನಲ್ಲಿ ಇದ್ದಾಗ ಕೂಡ ಇವರ ಲವ್ ಸ್ಟೋರಿ ಎಕ್ಸ್ಪೋಸ್ ಆಗಿತ್ತು. ಪರಸ್ಪರ ಪ್ರೀತಿಸಿ ಕುಟುಂಬದವರ ವಿರೋಧದ ನಡುವೆಯೂ ಮದುವೆಯಾಗಿ ಬದುಕು ಕಟ್ಟಿಕೊಳ್ಳ ಬಯಸಿದ್ದ ಇವರಿಗೆ ಗಂಡು ಮಗ ಕೂಡ ಇದ್ದಾನೆ.

ಸೋಶಿಯಲ್ ಮೀಡಿಯಾ ಪ್ರೊಫೈಲ್ ಗಳಲ್ಲಿ ಜೋಡಿಹಕ್ಕಿಗಳಂತೆ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದ ಇವರಿಬ್ಬರು ಇದ್ದಕ್ಕಿದ್ದಂತೆ ಒಂದು ದಿನ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡುವ ಮೂಲಕ ಹಳೆಯ ಫೋಟೋಗಳನ್ನು ಡಿಲೀಟ್ ಮಾಡಿಕೊಳ್ಳುವ ಮೂಲಕ ಎಲ್ಲವೂ ಸರಿ ಇಲ್ಲ ಎನ್ನುವ ಬಗ್ಗೆ ಸುಳಿವು ನೀಡಿದ್ದರು.

ಇದಾದ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ವಿ’ಚ್ಛೇ’ದ’ನ ಘೋಷಿಸಿಕೊಂಡಿದ್ದರು. ಆನಂತರ ಸಮಾಜನವನ್ನು ಎದುರಿಸುವುದು ಇಬ್ಬರಿಗೂ ಅಷ್ಟು ಸುಲಭವಾಗಿರಲಿಲ್ಲ, ಆದರೂ ಇದೀಗ ಸುಧಾರಿಸಿಕೊಂಡು ಮತ್ತೆ ಹೊಸ ಉತ್ಸಾಹದಿಂದ ಬದುಕಿನ ಕಡೆ ಮುಖ ಮಾಡಿದ್ದಾರೆ. ಡಿ’ವೋ’ರ್ಸ್ ಆದ ಬಳಿಕ ಒಬ್ಬರ ತಂಟೆಗೆ ಒಬ್ಬರು ಹೋಗದೆ ಆರಾಮಾಗಿದ್ದರು ಆದರೆ ಈ ಮಧ್ಯೆ ಕೀರ್ತಿ ಗೆಳೆಯ ನಿರಂಜನ್ ಮಾಡಿದ ಸಣ್ಣ ಎಡವಟ್ಟಿನಿಂದ ಮತ್ತೆ ಇವರಿಬ್ಬರ ನಡುವೆ ವೈಮನಸ್ಸು ಭುಗಿಲೆದ್ದಿದೆ.

ಸಾಲದಕ್ಕೆ ಸಾಲದಕ್ಕೆ ಅರ್ಪಿತ ಸರಿಯಾಗಿ ತರಾಟೆ ತೆಗೆದುಕೊಂಡು ಗ್ರಹಚಾರ ಬಿಡಿಸಿ ವಾರ್ನಿಂಗ್ ಕೂಡ ನೀಡಿದ್ದಾರೆ. ಕಿರಿಕ್ ಕೀರ್ತಿ ಹಾಗೂ ನಿರಂಜನ್ ಒಟ್ಟಿಗೆ ಸೇರಿ ಮಿಸ್ಟರ್ ನಿರಿಕ್ ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದಾರೆ. ಈ ವಾಹಿನಿ ಕಾರ್ಯಕ್ರಮವೊಂದರಲ್ಲಿ ನಟಿ ಒಬ್ಬರನ್ನು ಇಂಟರ್ವ್ಯೂ ಮಾಡುವ ಸಮಯದಲ್ಲಿ ಪರಸ್ಪರ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು.

ಈ ಸಮಯದಲ್ಲಿ ನಟಿ ಕೀರ್ತಿಗೆ ನಿಮ್ಮ ಮಗುವಿಗೆ ನೀವು ಇಷ್ಟವೋ ಅಥವಾ ನಿಮ್ಮ ಪತ್ನಿ ಇಷ್ಟವಾ ಎಂದು ಕೇಳಿದಾಗ ಕಿರಿಕ್ ಕೀರ್ತಿ ನನ್ನ ಮಗನಿಗೆ ನನ್ನ ಹೆಂಡತಿ ಇಷ್ಟ ಎಂದು ಹೇಳಿದ್ದಾರೆ. ಯಾವಾಗಲೂ ಆನ್ ಟೈಮ್ ಕಾಮಿಡಿ ಮಾಡುವ ನಿರಂಜನ್ ಇಲ್ಲೂ ಕೂಡ ತಮಾಷೆ ಮಾಡಲು ಹೋಗಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.

ಕಿರಿಕ್ ಕೀರ್ತಿ ಈ ರೀತಿ ಅಂದಿದ್ದೆ ತಡ ನನಗೂ ಕೂಡ ಅವರೇ ಇಷ್ಟ ಎಂದಿದ್ದಾರೆ ತಕ್ಷಣ ಎಲ್ಲರೂ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಜೋರಾಗಿ ನಕ್ಕಿದ್ದಾರೆ. ಬಳಿಕ ನಿರಂಜನ್ ನಾನು ಹೇಳಿದ್ದು ನನಗೂ ಕೂಡ ಅವರ ಅಮ್ಮನೇ ಅಂದರೆ ಕೀರ್ತಿ ಅಮ್ಮ ಇಷ್ಟ ಎಂಬ ಅರ್ಥದಲ್ಲಿ ಹೇಳಿದ್ದು ಎಂದಿದನ್ನು ಕಾಮಿಡಿ ಆಗಿಯೇ ತೇಲಿಸುವ ಪ್ರಯತ್ನ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಅರ್ಪಿತ ಅದೇ ವಿಡಿಯೋ ಕೆಳಗೆ ನಿರೂಪಕನೊಬ್ಬನಿಗೆ ಏನು ಮಾತನಾಡಬೇಕು, ಮಾತನಾಡಬಾರದು ಎನ್ನುವುದರ ಬಗ್ಗೆ ಪ್ರಜ್ಞೆ ಇರಬೇಕು ಸುಖ ಸುಮ್ಮನೆ ಬೇರೆಯವರ ಹೆಸರು ತೆಗೆದು ಕೊಂಡು ಕಾಮಿಡಿ ಮಾಡುವುದು ಸರಿಯಲ್ಲ ಇದೇ ಕೊನೆಯ ಬಾರಿ ಇನ್ನೊಮ್ಮೆ ರಿಪೀಟ್ ಆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

Leave a Comment