Shishir Shasthry
ಬಿಗ್ ಬಾಸ್ ಸೀಸನ್ 11 (Bigboss S11) ಭರ್ಜರಿಯಾಗಿಆರಂಭಗೊಂಡಿದೆ. ಎಂದಿನಂತೆ ವಿಭಿನ್ನ ಕ್ಷೇತ್ರಗಳಿಂದ ಆಯ್ಕೆಗೊಂಡ 17 ವಿಭಿನ್ನ ವ್ಯಕ್ತಿತ್ವಗಳು ದೊಡ್ಮನೆ ಸೇರಿದ್ದಾರೆ. 100 ದಿನಗಳ ಈ ಆಟ ಮೊದಲ ದಿನದಿಂದಲೇ ಬಹಳ ಕುತೂಹಲ ಮೂಡಿಸಿದ್ದು ಸ್ವರ್ಗ ನರಕ ಕಾನ್ಸೆಪ್ಟ್ ಆರಂಭವಾಗಿರುವ ಈ ಬಾರಿಯ ಬಿಗ್ ಬಾಸ್ ರಣಾಂಗಣ ದಿನದಿಂದದಿನಕ್ಕೆ ರಂಗೇರುತ್ತಿದೆ.
ಬಿಗ್ ಬಾಸ್ ಕಾರ್ಯಕ್ರಮ ಅನೌನ್ಸ್ ಆದ ಮೇಲೆ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಬರಿ ಇದೇ ಸುದ್ದಿ ಇರುತ್ತದೆ. ಹಾಗೆ ಈ ಬಾರಿಯ ಬಿಗ್ ಬಾಸ್ ಗೆ ಯಾರು ಹೋಗಬೇಕೆಂಬ ಅಭಿಪ್ರಾಯ ಮತ್ತು ಯಾರೆಲ್ಲಾ ಹೋಗಬಹುದು ಊಹೆಯ ಲಿಸ್ಟ್ ಹರಿದಾಡುತ್ತಿರುತ್ತದೆ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಮೇಲೂ ಕೂಡ ಒಂದಲ್ಲ ಒಂದು ಕಾರಣಕ್ಕೆ ಮನೆ ಒಳಗಿನ ಮಂದಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಬರುತ್ತಲೇ ಇರುತ್ತದೆ.
ಅಂತೆಯೇ ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟೆಂಟ್ ಶಿಶಿರ್ ಶಾಸ್ತ್ರಿ (Shishir Shastri) ಅವರ ಕುರಿತ ಒಂದಷ್ಟು ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ, ಅದರಲ್ಲೂ ಇವು ಅವರ ಮದುವೆ ವಿಚಾರದ ಕುರಿತದ್ದಾಗಿದೆ. ಬಿಗ್ ಬಾಸ್ ಸೀಸನ್ 11ರ ಗ್ರಾಂಡ್ ಓಪನಿಂಗ್ ದಿನ ಸುದೀಪ್ ಅವರು ಎಲ್ಲಾ ಕಂಟೆಸ್ಟೆಂಟ್ ಗಳ ಪರಿಚಯ ಹೇಳಿ ಮಾತನಾಡಿಸಿ ಮನೆ ಒಳಗೆ ಕಳಿಸುವ ವೇಳೆ ತಮ್ಮ ಬಗ್ಗೆ ಹೇಳಿಕೊಂಡ ಶಿಶಿರ್ ಶಾಸ್ತ್ರಿಯವರು.
ತಾವಿನ್ನು ಸಿಂಗಲ್ ಎಂದಿದ್ದರು. ಆದರೆ ಅಸಲಿ ವಿಷಯ ಏನೆಂದರೆ, ಈಗಾಗಲೇ ಇವರಿಗೆ ಮದುವೆ ಆಗಿದೆ ಮತ್ತು ಇವರ ಮದುವೆ ಹಾಗೂ ನಂತರ ಮುರಿದು ಬಿದ್ದ ಸಂಬಂಧದ ಬಗ್ಗೆ ಹಾಗೂ ಆಕೆ ಯಾರು ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದರೆ ಚರ್ಚೆಯಾಗುತ್ತಿದೆ. ಶಿಶಿರ್ ಶಾಸ್ತ್ರಿ ಕಿರುತೆರೆ ಜನರಿಗೆ ಬಹಳ ಪರಿಚಿತರು. ಸೊಸೆ ತಂದ ಸೌಭಾಗ್ಯ, ಪುಟ್ಟಗೌರಿ ಮದುವೆ, ಕುಲವಧು ಸೇರಿದಂತೆ ಜನಪ್ರಿಯ ವಾಹಿನಿಯ ಯಶಸ್ವಿ ಧಾರಾವಾಹಿಗಳಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದ ಇವರು ತಾವು ಸಿಕ್ಕಾಪಟ್ಟೆ ಪಾಪುಲರ್ ಆಗಿದ್ದ ಸಮಯದಲ್ಲಿ ಪ್ಯಾಟೆ ಹುಡುಗೀರ್ ಹಳ್ಳಿ ಲೈಫು ಖ್ಯಾತಿಯ ಕೋಳಿ ರಮ್ಯಾ (Koli Ramya) ಅವರನ್ನು ಮದುವೆ ಆಗಿದ್ದರು.
ಕೋಳಿ ರಮ್ಯಾ ಅವರು ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಫೇಮಸ್ ಆಗಿದ್ದರು, ಇದೀಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಇವರಿಬ್ಬರು ಒಂದೇ ಧಾರಾವಾಹಿಯಲ್ಲಿ ಕೂಡ ಕೆಲಸ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆ ಕೂಡ ಆಗಿತ್ತು. ಆರಂಭದಲ್ಲಿ ಎಲ್ಲಾ ಸರಿಯಿದ್ದ ಸಂಬಂಧದಲ್ಲಿ ಅಪಸ್ವರವೆದ್ದು ಇಬ್ಬರು ಡಿ’ವೋ’ರ್ಸ್ ಮಾಡಿಕೊಳ್ಳುವ ಮೂಲಕ ದೂರವಾಗಿ ಹೋದರು.
ಇತ್ತೀಚಿಗೆ ಸಿಕ್ಕ ಮಾಹಿತಿ ಪ್ರಕಾರ ಈಗ ಕೋಳಿ ರಮ್ಯಾ ಅವರು ಡ್ಯಾನ್ಸ್ ಮಾಸ್ಟರ್ ವರದಾ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ. ಹೀಗಾಗಿ ವೇದಿಕೆ ಮೇಲೆ ಅವರು ಈ ರೀತಿ ಹೇಳಿಕೊಂಡಿರುವುದು. ಇನ್ನು ಬಿಗ್ ಬಾಸ್ ಕಾರ್ಯಕ್ರಮದ ಅವಕಾಶ ಸಿಕ್ಕಿರುವುದು ಬಗ್ಗೆ ಬಹಳ ಗೌರವ ಹೊಂದಿರುವ ಶಿಶಿರ್ ಶಾಸ್ತ್ರಿ 13 ವರ್ಷಗಳ ನನ್ನ ಶ್ರಮಕ್ಕೆ ಇಂತಹ ವೇದಿಕೆ ಅವಕಾಶ ಸಿಕ್ಕಿದೆ ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತೇನೆ. ಬಿಗ್ ಬಾಸ್ ಕಾರ್ಯಕ್ರಮ ಗೆಲ್ಲುವುದೇ ನನ್ನ ಗುರಿ ಇದನ್ನು ಸಾಧಿಸಿಯೇ ತೀರುತ್ತೇನೆ ಎಂದು ಹೇಳುವ ಮೂಲಕ ಮನೆ ಒಳಗೆ ಹೋಗಿದ್ದಾರೆ. ಇವರ ಅದೃಷ್ಟ ಹಾಗೂ ಆಟ ಹೇಗಿರಲಿದೆ ಕಾದು ನೋಡೋಣ.